Mumgaaru maleye enu ninna hanigala leele

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
Language

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ ಧರೆಯ ಕೊರಳ ಪ್ರೇಮದಮಾಲೆ
ಸುರಿವ ಒಲುಮೆಯ ಜಡಿಮಳೆಗೆ ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿ ಒಡೆಯುವುದೋ ತಿಳಿಯದಾಗಿದೆ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...

ಭುವಿ ಕೆನ್ನೆ ತುಂಬಾ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯಾ ಸವಿಸದ್ದು ಪ್ರೇಮನಾದವೋ....
ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನಬಿಲ್ಲು ಏನು ಮೋಡಿಯೋ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...

ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ
ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರೋ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...

ಒಲವ ಚಂದಮಾಮ ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ..
ಪ್ರಣಯದೂರಿನಲ್ಲಿ ಕಳೆದು ಹೋಗೊ ಸುಖವ ಇಂದು
ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ....

muṁgāru maḽĕye enu ninna hanigaḽa līlĕ
ninna mugila sāle dharĕya kŏraḽa premadamālĕ
suriva ŏlumĕya jaḍimaḽĕgĕ prīti mūḍidĕ
yāva chippinalli yāva haniyu muttāguvudo
ŏlavu ĕlli kuḍi ŏḍĕyuvudo tiḽiyadāgidĕ
muṁgāru maḽĕye enu ninna hanigaḽa līlĕ...

bhuvi kĕnnĕ tuṁbā mugilu surida muttina gurutu
nanna ĕdĕya tuṁbā avaḽu baṁda hĕjjĕya gurutu
hĕjjĕ gĕjjĕyā savisaddu premanādavo....
ĕdĕ mugilinalli raṁgu chĕlli niṁtaḽu avaḽu
barĕdu hĕsara kāmanabillu enu moḍiyo
muṁgāru maḽĕye enu ninna hanigaḽa līlĕ...

yāva hanigaḽiṁda yāva nĕlavu hasirāguvudo
yāra sparśhadiṁda yāra manavu hasiyāguvudo
yāra usiralyāra hĕsaro yāru barĕdaro
yāva prīti hūvu yāra hṛdayadallaraḽuvudo
yāra prema pūjĕgĕ muḍipo yāru ballaro
muṁgāru maḽĕye enu ninna hanigaḽa līlĕ...

ŏlava chaṁdamāma naguta baṁda manadaṁgaḽakĕ
prīti bĕḽakinalli hṛdaya hŏraṭidĕ mĕravaṇigĕ
avaḽa premadūrina kaḍĕgĕ prīti payaṇavo..
praṇayadūrinalli kaḽĕdu hogŏ sukhava iṁdu
dhanyanādĕ paḍĕdukŏṁḍu hŏsa janmavo
muṁgāru maḽĕye enu ninna hanigaḽa līlĕ....