ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಮೂಡಿದೆ
ಹೇಳುವುದು ಏನೋ ಉಳಿದುಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ
ನೋವಿನಲ್ಲಿ ಜೀವ ಜೀವ ಅರಿತಾನಂತರ
ನಲಿವು ಬೇರೆ ಏನಿದೆ ಪ್ರೀತಿ ಅಂತರ
ನಿನ್ನ ಹಾಡಿನಲ್ಲಿ ಇಂದು ಬೇರೆವ ಕಾತರ
ಒಂದೇ ಸಾರಿ ನೀ ಕೇಳೆಯ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ
ಕೇಳಲಿ ಹೇಗೆ ತಿಳಿಯದಾಗಿದೆ
ಕಣ್ಣು ತೆರೆದು ಕಾಣುವ ಕನಸೇ ಜೀವನ
ಸಣ್ಣ ಹಠವ ಮಾಡಿದೆ ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗನ
ಕೇಳು ಜೀವವೇ ಏತಕೆ ಕಂಪನ
ಹೃದಯವು ಇಲ್ಲೇ ಕಳೆದು ಹೋಗಿದೆ
ಹುಡುಕಲೇ ಬೇಕೆ ತಿಳಿಯದಾಗಿದೆ
maḽĕ niṁtu hoda melĕ haniyŏṁdu mūḍidĕ
mātĕlla mugida melĕ daniyŏṁdu mūḍidĕ
heḽuvudu eno uḽiduhogidĕ
heḽali hegĕ tiḽiyadāgidĕ
novinalli jīva jīva aritānaṁtara
nalivu berĕ enidĕ prīti aṁtara
ninna hāḍinalli iṁdu berĕva kātara
ŏṁde sāri nī keḽĕya ī svara
manasalli chūru jāga bekidĕ
keḽali hegĕ tiḽiyadāgidĕ
kaṇṇu tĕrĕdu kāṇuva kanase jīvana
saṇṇa haṭhava māḍidĕ hṛdaya ī dina
ĕdĕya dūravāṇiya karĕya riṁgana
keḽu jīvave etakĕ kaṁpana
hṛdayavu ille kaḽĕdu hogidĕ
huḍukale bekĕ tiḽiyadāgidĕ