Joteyali jote joteyali

ಜೊತೆಯಲಿ ಜೊತೆ ಜೊತೆಯಲಿ
Work
Language

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ
ಅಅ ಅ ಅ ಎಂಥ ಮಾತಾಡಿದೆ
ಇಂದು ನೀ ಎಂಥ ಮಾತಾಡಿದೆ
ನನ್ನ ಮನಸಿನ ಭಾವನೆ ನೀನೇ ಹೇಳಿದೆ || ಜೊತೆ ||

ಪ್ರೀತಿ ಎಂದರೇನು ಎಂದು ಈಗ ಅರಿತೆನು || ೨ ||
ಸವಿ ನುಡಿಯಲಿ ತನು ಅರಳಿತು
ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ ಕರಗಿ ಹೋದೆ ನೋಟಕೆ
ತರುವೆ ನಿನಗೆ ಬಾ ಪ್ರೀತಿ ಕಾಣಿಕೆ || ಜೊತೆ ||

ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ || ೨ ||
ಹಾರಾಡುವ ಅರಗಿಣಿಗಳೋ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತಾ ನಾವಾಡುವ
ಹಗಲು ಇರುಳು ಒಂದಾಗಿ ಹಾರುವ || ಜೊತೆ ||

jŏtĕyali jŏtĕ jŏtĕyali iruvĕnu hīgĕ ĕṁdū
aa a a ĕṁtha mātāḍidĕ
iṁdu nī ĕṁtha mātāḍidĕ
nanna manasina bhāvanĕ nīne heḽidĕ || jŏtĕ ||

prīti ĕṁdarenu ĕṁdu īga aritĕnu || 2 ||
savi nuḍiyali tanu araḽitu
saviganasali mana kuṇiyitu
ŏlavina ī mātigĕ karagi hodĕ noṭakĕ
taruvĕ ninagĕ bā prīti kāṇikĕ || jŏtĕ ||

moḍadalli joḍiyāgi teli naliyuva || 2 ||
hārāḍuva aragiṇigaḽo mātāḍisi muddāḍuva
kāmana billeruva jārutā nāvāḍuva
hagalu iruḽu ŏṁdāgi hāruva || jŏtĕ ||