Ade bhoomi ade bhaanu

ಅದೇ ಭೂಮಿ ಅದೇ ಭಾನು
Language

ಅದೇ ಭೂಮಿ ಅದೇ ಭಾನು ಈ ನಯನ ನೂತನ
ಅದೇ ದಾರಿ ಅದೇ ತಿರುವು ಈ ಪಯಣ ನೂತನ
ನನ್ನ ಮೋಡ ನನ್ನ ಹಾಡು ನನ್ನ ಕನಸೇ ಒಮ್ಮೆ ನೋಡು
ನನ್ನ.... ಚೆಲುವಿನ ನಂದನ... ಓ...
ಏನು ಮಧುರ ಈ ಬಂಧನ...

ಉದಯಕಿರಣ ಸೆಳೆದಾಗ ಹೂವಹನಿಯು ಹೊಳೆದಾಗ ಋತುವಿನ ಬಂಧನ
ಹೃದಯ ಕಣ್ಣಲ್ಲಿ ಒಲಿವಾಗ ಬೆರೆತು ಈ ಜೀವ ನಲಿವಾಗ ಒಲವಿನ ಬಂಧನ... || ಅದೇ ಭೂಮಿ... ||

ಕನಸಿನ ನೂರು ಎಳೆಯಿಂದ ನೇಯುವ ಗೂಡು ಸಂಬಂಧ ನಲುಮೆಯ ಬಂಧನ
ಯಾರೋ ಕರೆದಂತೆ ದೂರಿಂದ ಗರಿಯ ತೆರೆದಂತ ಮರೆಚಂದ ಗೆಲುವಿನ ಬಂಧನ.... || ಅದೇ ಭೂಮಿ... ||

ade bhūmi ade bhānu ī nayana nūtana
ade dāri ade tiruvu ī payaṇa nūtana
nanna moḍa nanna hāḍu nanna kanase ŏmmĕ noḍu
nanna.... chĕluvina naṁdana... o...
enu madhura ī baṁdhana...

udayakiraṇa sĕḽĕdāga hūvahaniyu hŏḽĕdāga ṛtuvina baṁdhana
hṛdaya kaṇṇalli ŏlivāga bĕrĕtu ī jīva nalivāga ŏlavina baṁdhana... || ade bhūmi... ||

kanasina nūru ĕḽĕyiṁda neyuva gūḍu saṁbaṁdha nalumĕya baṁdhana
yāro karĕdaṁtĕ dūriṁda gariya tĕrĕdaṁta marĕchaṁda gĕluvina baṁdhana.... || ade bhūmi... ||